ಮಹಾಪೂಜೆಯಲ್ಲಿ ಪಾಲ್ಗೊಂಡು ಅನ್ನಪ್ರಸಾದಕ್ಕೆ ಚಾಲನೆ ನೀಡಿದ ಡಾ. ರಮೇಶ್ ಮಹಾದೇವಪ್ಪನವರ

ಮಹಾಪೂಜೆಯಲ್ಲಿ ಪಾಲ್ಗೊಂಡು ಅನ್ನಪ್ರಸಾದಕ್ಕೆ ಚಾಲನೆ ನೀಡಿದ ಡಾ. ರಮೇಶ್ ಮಹಾದೇವಪ್ಪನವರ

ಹುಬ್ಬಳ್ಳಿ: ಶ್ರೀ ವಿಘ್ನೇಶ್ವರ ಗೆಳೆಯರ ಬಳಗ, ವೀರಾಪುರ ಓಣಿ (ಗೌಡರ ಓಣಿ) ವತಿಯಿಂದ ಶ್ರೀ ಗಣೇಶ ಪ್ರತಿಷ್ಠಾಪನೆಯ 30ನೇ ವರ್ಷದ ಸಂಭ್ರಮದ ಅಂಗವಾಗಿ ಮಹಾಪೂಜಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಅವರು ಪಾಲ್ಗೊಂಡು ಶ್ರೀ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅನ್ನಪ್ರಸಾದಕ್ಕೆ ಚಾಲನೆ ನೀಡಿ, ಭಕ್ತರನ್ನುದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ. ರಮೇಶ್ ಮಹಾದೇವಪ್ಪನವರ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಲಡ್ಡು ಮುತ್ಯಾ ಅಜ್ಜನವರು, ಶ್ರೀ ವಿಘ್ನೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಶ್ರೀ ಪ್ರವೀಣ ಕುಬಸದ, ಮುಖಂಡರಾದ ಶ್ರೀ ಶಿವರಾಜ್ ಗೌರಿ, ಶ್ರೀ ಚಂದ್ರಶೇಖರ ಗೌಡ ಪಾಟೀಲ್, ಶ್ರೀ ಪ್ರಶಾಂತ್ ಪಾಯಣ್ಣವರ, ಶ್ರೀ ಶ್ರೀಕಾಂತಗೌಡ ಪಾಟೀಲ್, ಶ್ರೀ ರಾಜು ಈಜಾರದ ಸೇರಿದಂತೆ ಪ್ರಮುಖರು ಹಾಗೂ ಗಣೇಶ ಭಕ್ತಾದಿಗಳು ಉಪಸ್ಥಿತರಿದ್ದರು.

ಗಣೇಶೋತ್ಸವದ ಅಂಗವಾಗಿ ನಡೆದ ಮಹಾಪೂಜೆ ಹಾಗೂ ಅನ್ನಪ್ರಸಾದ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಶ್ರೀ ವಿಘ್ನೇಶ್ವರನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.