ಹುಡುಗಿ ವಿಚಾರಕ್ಕೆ ಚಾಕು ಇರಿತ ಏಳು ಜನ ಆರೋಪಿಗಳ ಬಂಧನ..!

ಹುಬ್ಬಳ್ಳಿ ವಿಧ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪರಾಧ ಸುದ್ದಿ!

ಹುಡುಗಿ ವಿಚಾರಕ್ಕೆ ಚಾಕು ಇರಿತ ಏಳು ಜನ ಆರೋಪಿಗಳ ಬಂಧನ..!

ಹುಬ್ಬಳ್ಳಿ: ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಡೆದ ಯುವತಿ ವಿಚಾರಕ್ಕೆ ಸಂಬಂಧಿಸಿದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನ ಆರೋಪಿಗಳನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾರುತಿ ಮತ್ತು ಅಭಿಷೇಕ್ ಎಂಬ ಯುವಕರಿಗೆ ಬರ್ತ್‌ಡೇ ಆಚರಣೆಗೆ ಕರೆದುಕೊಂಡು ಹೋಗಿ ಚಾಕು ಇರಿದ ಘಟನೆ ನಿನ್ನೆ ರಾತ್ರಿ ನಡೆದಿತ್ತು, ಘಟನೆಯ ನಂತರ ವಿದ್ಯಾನಗರ ಠಾಣೆ ಪೊಲೀಸರು ತಕ್ಷಣ ಚುರುಕುಗೊಂಡು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳು ಮಣಿಕಂಠ, ಪ್ರಜ್ವಲ್, ಸುಬ್ರಹ್ಮಣ್ಯ, ಅನೋಕ್, ಮನೋಜ್, ಅಭ್ಯಾ ಹಾಗೂ ಶಂಕರ್ ಎಂದು ಗುರುತಿಸಲಾಗಿದ್ದು, ಇವರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ.