"ಕುಶಾಲ್ಸ್ ಫ್ಯಾಷನ್ ಜ್ಯುವೆಲ್ಲರಿಯ 132ನೇ ಮಳಿಗೆ ಆರಂಭ 10 ಸಾವಿರಕ್ಕೂ ಹೆಚ್ಚು ವಿನ್ಯಾಸಗಳ ಆಭರಣಗಳೊಂದಿಗೆ ಬಳ್ಳಾರಿಗೆ ಕುಶಾಲ್ಸ್ ಪ್ರವೇಶ!

ಬಳ್ಳಾರಿ: ಭಾರತದ ಪ್ರಮುಖ ಫ್ಯಾಷನ್ ಹಾಗೂ ಬೆಳ್ಳಿ ಆಭರಣಗಳ ಬ್ರ್ಯಾಂಡ್ಗಳಲ್ಲಿ ಒಂದಾಗಿರುವ ಕುಶಾಲ್ಸ್ ಫ್ಯಾಷನ್ ಜ್ಯುವೆಲ್ಲರಿಯ 132ನೇ ಮಳಿಗೆ ಬಳ್ಳಾರಿಯ ಇನ್ಫ್ಯಾಂಟ್ರಿ ರಸ್ತೆಯಲ್ಲಿ ಸೋಮವಾರ ಅದ್ಧೂರಿಯಾಗಿ ಉದ್ಘಾಟನೆಗೊಂಡಿತು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಬಿ. ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ಮಳಿಗೆಗೆ ಶುಭ ಹಾರೈಸಿದರು.
ಸುಮಾರು 1,700 ಚದರ ಅಡಿ ವಿಸ್ತೀರ್ಣದ ಮಳಿಗೆಯಲ್ಲಿ ನೆಕ್ಲೆಸ್, ಚೋಕರ್, ಕಿವಿಯೋಲೆ, ಉಂಗುರ, ಪೆಂಡೆಂಟ್ ಸೆಟ್, ಬ್ರೇಸ್ಲೆಟ್, ಕಡಾ, ಮಾಂಗ್ ಟಿಕ್ಕಾ, ಬ್ರೂಚ್ ಸೇರಿದಂತೆ 10 ಸಾವಿರಕ್ಕೂ ಹೆಚ್ಚು ವಿನ್ಯಾಸಗಳ ಆಭರಣಗಳನ್ನು ಗ್ರಾಹಕರಿಗೆ ಪರಿಚಯಿಸಲಾಗಿದೆ.
ಸಾಂಪ್ರದಾಯಿಕ ಭಾರತೀಯ ಕರಕುಶಲ ವಿನ್ಯಾಸಗಳೊಂದಿಗೆ ಆಧುನಿಕ ಫ್ಯಾಷನ್ಗೆ ಹೊಂದಿಕೊಳ್ಳುವ ಆಭರಣಗಳಿಗೂ ಮಳಿಗೆಯಲ್ಲಿ ಆದ್ಯತೆ ನೀಡಲಾಗಿದ್ದು, ಹಬ್ಬ-ಹರಿದಿನಗಳು, ವಿಶೇಷ ಸಮಾರಂಭಗಳು ಹಾಗೂ ದೈನಂದಿನ ಬಳಕೆಗೆ ಸೂಕ್ತವಾದ ವಿವಿಧ ವಿನ್ಯಾಸಗಳು ಲಭ್ಯವಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಕುಶಾಲ್ಸ್ ಫ್ಯಾಷನ್ ಜ್ಯುವೆಲ್ಲರಿಯ ನಿರ್ದೇಶಕ ಅಂಕಿತ್ ಗುಲೆಚ್ಛಾ, ಬಳ್ಳಾರಿಯಲ್ಲಿ ನೂತನ ಮಳಿಗೆ ಆರಂಭಿಸಿರುವುದು ಸಂತಸ ತಂದಿದೆ. ಗ್ರಾಹಕರಿಗೆ ವೈವಿಧ್ಯಮಯ ವಿನ್ಯಾಸಗಳು, ಗುಣಮಟ್ಟದ ಆಭರಣಗಳು ಹಾಗೂ ಉತ್ತಮ ಶಾಪಿಂಗ್ ಅನುಭವ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ಬಳ್ಳಾರಿ ಹಾಗೂ ಸುತ್ತಮುತ್ತಲಿನ ಗ್ರಾಹಕರಿಗೆ ವಿಶಾಲ ಶ್ರೇಣಿಯ ಆಭರಣಗಳನ್ನು ಒಂದೇ ಸ್ಥಳದಲ್ಲಿ ಒದಗಿಸಲು ಮಳಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
2006ರಲ್ಲಿ ಆರಂಭವಾದ ಕುಶಾಲ್ಸ್ ಫ್ಯಾಷನ್ ಜ್ಯುವೆಲ್ಲರಿ, ಪ್ರಸ್ತುತ ದೇಶದ 40ಕ್ಕೂ ಹೆಚ್ಚು ನಗರಗಳಲ್ಲಿ ತನ್ನ ಮಳಿಗೆಗಳನ್ನು ಹೊಂದಿದ್ದು, ಬಳ್ಳಾರಿ ಮಳಿಗೆಯ ಮೂಲಕ ಕರ್ನಾಟಕದಲ್ಲಿ ತನ್ನ ವಿಸ್ತರಣೆಯನ್ನು ಮತ್ತಷ್ಟು ಬಲಪಡಿಸಿದೆ.
ಕಾರ್ಯಕ್ರಮದಲ್ಲಿ ಕುಶಾಲ್ಸ್ ಫ್ಯಾಷನ್ ಜ್ಯುವೆಲ್ಲರಿಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ, ಆಭರಣ ಪ್ರಿಯರು, ಗ್ರಾಹಕರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
yallu