ಶ್ರೀ ಲಕ್ಷ್ಮಿ ನಾರಾಯಣ ಹಾಗೂ ಭೂ ವರಾಹ ಸ್ವಾಮಿ ದೇವಸ್ಥಾನಕ್ಕೆ ಗೌರಮ್ಮಾ ಬಲೋಗಿ ಭೇಟಿ ವಿಶೇಷ ಪೂಜೆ!

ಶ್ರೀ ಲಕ್ಷ್ಮಿ ನಾರಾಯಣ ಹಾಗೂ ಭೂ ವರಾಹ ಸ್ವಾಮಿ ದೇವಸ್ಥಾನಕ್ಕೆ ಗೌರಮ್ಮಾ ಬಲೋಗಿ ಭೇಟಿ ವಿಶೇಷ ಪೂಜೆ!

ಖಾನಾಪುರ: ತಾಲೂಕಿನ ಹಲಸಿ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ಲಕ್ಷ್ಮಿ ನಾರಾಯಣ ಹಾಗೂ ಭೂ ವರಾಹ ಸ್ವಾಮಿ ದೇವಸ್ಥಾನಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ರೀಮತಿ ಗೌರಮ್ಮಾ ಬಲೋಗಿ ಅವರು ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ದೇವರ ದರ್ಶನ ಪಡೆದು, ಭಕ್ತಿಭಾವದಿಂದ ಪೂಜೆ ಸಲ್ಲಿಸಿದ ಗೌರಮ್ಮಾ ಬಲೋಗಿ ಅವರು ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಧಾರ್ಮಿಕ ವಾತಾವರಣದಲ್ಲಿ ಭಕ್ತಿಭಾವದಿಂದ ಪೂಜಾ ಕಾರ್ಯಕ್ರಮ ನೆರವೇರಿದ್ದು ಎಲ್ಲರಿಗೂ ಒಳ್ಳೆಯದು ಆಗಲೇಂದು ತಿಳಿಸಿದರು.

ಈ ಸಂದರ್ಭದಲ್ಲಿ ,ವಿನಯ್ ಕುಮಾರ್‌ ಬಲೋಗಿ, ಸವಿತಾ ಶಿಂದೆ, ವಿಜಯಲಕ್ಷ್ಮಿ ಅನಾಡ್, ಸರಸ್ವತಿ ಬೆಂಗೇರಿ, ಶಾರದಾ ನಿಗದಿ, ಶೋಭಾ ಪಚಗೆ ಇದ್ದರು.