ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಚೋಳ ಗೋಲ್ಡ್ ಲೋನ್ 380ನೇ ಶಾಖೆ ಆರಂಭ: ಡಾ.ರಮೇಶ್ ಅವರಿಂದ ಉದ್ಘಾಟನೆ

ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಚೋಳ ಗೋಲ್ಡ್ ಲೋನ್ 380ನೇ ಶಾಖೆ ಆರಂಭ: ಡಾ.ರಮೇಶ್ ಅವರಿಂದ ಉದ್ಘಾಟನೆ

ಹುಬ್ಬಳ್ಳಿ: ಗ್ರಾಹಕರ ಅಚ್ಚುಮೆಚ್ಚಿನ ಚೋಳ ಗೋಲ್ಡ್ ಲೋನ್ ಸಂಸ್ಥೆಯ 380ನೇ ಶಾಖೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ನೂತನವಾಗಿ ಆರಂಭಗೊಂಡಿದೆ.

ಗ್ರಾಹಕರಿಗೆ ಅನುಕೂಲವಾಗುವಂತೆ ವಿವಿಧ ರೀತಿಯ ಸೌಲಭ್ಯಗಳನ್ನು ಒಳಗೊಂಡಿರುವ ಈ ನೂತನ ಕಚೇರಿ, ಕೇಶ್ವಾಪುರ ಹಾಗೂ ಸುತ್ತಮುತ್ತಲಿನ ಗ್ರಾಹಕರಿಗೆ ಮತ್ತಷ್ಟು ಸೇವೆ ಒದಗಿಸಲಿದೆ.

ಚೋಳ ಗೋಲ್ಡ್ ಲೋನ್‌ನ ನೂತನ ಕಚೇರಿಯನ್ನು ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಡಾ. ರಮೇಶ್ ಮಹಾದೇವಪ್ಪನವರ ಅವರಿಗೆ ಚೋಳ ಗೋಲ್ಡ್ ಲೋನ್ ಸಿಬ್ಬಂದಿ ವತಿಯಿಂದ ವಿಶೇಷ ಸ್ವಾಗತ ಕೋರಲಾಯಿತು. ಹೂವಿನ ಸುರಿಮಳೆಗೈದು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ನೂತನ ಶಾಖೆಯ ಆರಂಭದೊಂದಿಗೆ ಕೇಶ್ವಾಪುರ ಭಾಗದ ಗ್ರಾಹಕರಿಗೆ ಚೋಳ ಗೋಲ್ಡ್ ಲೋನ್‌ನ ಸೇವೆಗಳು ಮತ್ತಷ್ಟು ಹತ್ತಿರವಾಗಿವೆ.

ಈ ಸಂದರ್ಭದಲ್ಲಿ ಸೋಬಿತ್ ಬಾಸ್ಕರನ್,ಸುರೇಶ್ ನಾಯರ್,ಅರುಣ ಪವಿತ್ರನ,ಮ್ಯಾಥೆವ್ ಅಲೆಕ್ಸಾಂಡರ್, ಅಶೋ,ಲಿಬಿನ,ಮಂಜುನಾಥ ಕರಿಸಿರು,ಜ್ಯೋತಿ, ಕೆಂಚಪ್ಪ ಸೇರಿದಂತೆ ಇತರರು ಇದ್ದರು.