ಹು-ಧಾ ಪಾಲಿಕೆಯ ಕಛೇರಿ ವ್ಯವಸ್ಥಾಪಕ ಗಣೇಶ ಮಡಿವಾಳಗೆ ಜಿಲ್ಲಾಧಿಕಾರಿಗಳಿಂದ ಸನ್ಮಾನ ಸತ್ಕಾರ!

ಹು-ಧಾ ಪಾಲಿಕೆಯ ಕಛೇರಿ ವ್ಯವಸ್ಥಾಪಕ ಗಣೇಶ ಮಡಿವಾಳಗೆ ಜಿಲ್ಲಾಧಿಕಾರಿಗಳಿಂದ ಸನ್ಮಾನ ಸತ್ಕಾರ!

ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಚೇರಿ ವ್ಯವಸ್ಥಾಪಕರಾದ ಗಣೇಶ ಮಡಿವಾಳ* ಅವರು ಇಂದು ತೋಳನಕೆರೆಯಲ್ಲಿ ನಡೆದ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಎಲ್ಲರ ಗಮನ ಸೆಳೆದರು.

ಗಾಂಧಿ ಜಯಂತಿ ಪ್ರಯುಕ್ತ ನಡೆದ ಸ್ವಚ್ಛತಾ ಅಭಿಯಾನ ಮತ್ತು ಪ್ಲಾಗಿಂಗ್ ಕಾರ್ಯಕ್ರಮದಲ್ಲಿ ತಮ್ಮ *ಅಸಾಧಾರಣ ಫಿಟ್ನೆಸ್, ಚುರುಕುತನ ಮತ್ತು ಕಸ ಸಂಗ್ರಹಣೆಯಲ್ಲಿನ ಬದ್ಧತೆಯಿಂದ* ಗಣೇಶ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

*ವೇದಿಕೆಯಲ್ಲೇ ಗೌರವ*

ಗಣೇಶ ಅವರ ಈ ಸೇವೆಯನ್ನು ಗುರುತಿಸಿ ಧಾರವಾಡ ಜಿಲ್ಲಾಧಿಕಾರಿ ಆರ್‌.ಸ್ನೇಹಲ್, ಪಾಲಿಕೆ ಆಯುಕ್ತರಾದ *ಡಾ. ರುದ್ರೇಶ್ ಎಸ್. ಘಾಳಿ (ಕ.ಆ.ಸೇ)* ಮತ್ತು ನಟಿ *ಮಯೂರಿ* ಅವರು ಪ್ರಮಾಣ ಪತ್ರ ನೀಡಿ ಗೌರವಿಸಿದರು.

"ಪಾಲಿಕೆ ಕಚೇರಿಯಲ್ಲಿ ಕೆಲಸ ಮಾಡುವ ಗಣೇಶ ಅವರ ಫಿಟ್ನೆಸ್ ನೋಡಿದರೆ" ಬಹಳ ಖುಷಿಯ ಸಂಗತಿ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಚ್ಛ ಹುಬ್ಬಳ್ಳಿ-ಧಾರವಾಡದ ಕನಸನ್ನು ನನಸು ಮಾಡುವಲ್ಲಿ ಗಣೇಶ ಮಡಿವಾಳ ಅವರಂತಹ ಅಧಿಕಾರಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.