ಜಿಲ್ಲಾಧ್ಯಕ್ಷೆ ಗೌರಮ್ಮಾ ಬಲೋಗಿ ನಿವಾಸದಲ್ಲಿ ವಿಶೇಷ ಸತ್ಯನಾರಾಯಣ ಪೂಜೆ: ಯುವ ನಾಯಕಿ ದೇವಕಿ ಯೋಗಾನಂದ ಭಾಗಿ;ಅರಿಶಿನ-ಕುಂಕುಮ ನೀಡಿ ಸತ್ಕಾರ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ರೀಮತಿ ಗೌರಮ್ಮಾ ಬಲೋಗಿ ಅವರ ನಿವಾಸದಲ್ಲಿ ವಿಶೇಷ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಹಮ್ಮಿಕೊಳ್ಳಲಾಗಿತ್ತು.
ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಯುವ ನಾಯಕಿ ದೇವಕಿ ಯೋಗಾನಂದ ಅವರು ಭಾಗವಹಿಸಿ, ಸತ್ಯನಾರಾಯಣ ಸ್ವಾಮಿಯ ದರ್ಶನ ಪಡೆದು ಆಶೀರ್ವಾದ ಪಡೆದರು. ಪೂಜೆಯ ಬಳಿಕ ಗೌರಮ್ಮಾ ಬಲೋಗಿ ಅವರು ದೇವಕಿ ಯೋಗಾನಂದ ಅವರಿಗೆ ಅರಿಶಿನ-ಕುಂಕುಮ ನೀಡಿ ಆತ್ಮೀಯವಾಗಿ ಸತ್ಕರಿಸಿದರು. ಈ ವೇಳೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
yallu