ಹುಬ್ಬಳ್ಳಿ:-ಪಕ್ಷೇತರ ಅಭ್ಯರ್ಥಿಗಳಿಬ್ಬರು ಕಾಂಗ್ರೆಸ್‌ಗೆ ಸೇರ್ಪಡೆ

ಹುಬ್ಬಳ್ಳಿ:-ಪಕ್ಷೇತರ ಅಭ್ಯರ್ಥಿಗಳಿಬ್ಬರು ಕಾಂಗ್ರೆಸ್‌ಗೆ ಸೇರ್ಪಡೆ

ಹುಬ್ಬಳ್ಳಿ : ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಹುಬ್ಬಳ್ಳಿಯ ಇಮ್ರಾನ್ ಕೊಡಲ, ರಾಣೆಬೆನ್ನೂರಿನ ಸಲೀಮ್ ಅಹದ್ ಬವಳಿ ಇಬ್ಬರೂ ನಾಮಪತ್ರ ವಾಪಸ್ ಪಡೆದಿದ್ದು, ಇಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇಬ್ಬರನ್ನೂ ಕಾಂಗ್ರೆಸ್ ಮುಖಂಡರಾದ ಅಶೋಕ್ ಕುಮಟಾಕರ್ ಮನವೊಲಿಸಿ, ಮೋಹನ್ ಲಿಂಬಿಕಾಯಿ ಅವರನ್ನು ಭೇಟಿ ಮಾಡಿಸಿದರು. ತದನಂತರ ನಂತರ ಇವರೆಲ್ಲರೂ ಜಿಲ್ಲಾ ಕಾಂಗ್ರೆಸ್ ಸದಾನಂದ ಡಂಗನವರ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಹಾವೇರಿ ಜಿಲ್ಲೆಯ ಆರ್. ಎಂ. ಕುಬೇರಪ್ಪ, ಸುರೇಶ ಎಸ್. ಬಿಚ್ಚಗೌಡರ ಅವರೂ ನಾಮಪತ್ರ ಹಿಂಪಡೆದಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸದಾನಂದ ಡಂಗನವರ, ಮುಖಂಡ ನಾಗರಾಜ್ ಗೌರಿ ಸೇರಿದಂತೆ ಇತರರು ಇದ್ದರು.