ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ಬದಲಾವಣೆ ಖಚಿತ " ಡಿಕೆಶಿ ಖಡಕ್ ಆದೇಶದಲ್ಲಿನಿದೇ?

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ಬದಲಾವಣೆ ಖಚಿತ " ಡಿಕೆಶಿ ಖಡಕ್ ಆದೇಶದಲ್ಲಿನಿದೇ?

ಧಾರವಾಡ:-  ಹುಬ್ಬಳ್ಳಿ ಧಾರವಾಡ ಜಿಲ್ಲೆ  ಕಾಂಗ್ರೆಸ್ ಪಕ್ಷದಲ್ಲಿ ಸುಮಾರು ವರ್ಷಗಳಿಂದ ಅಧ್ಯಕ್ಷ ಸ್ಥಾನ ಹಿಡಿದುಕೊಂಡು ಕುಂತಿದ್ದ ಅಧ್ಯಕ್ಷರಿಗೆ ಈಗ ಢವಢವ ಆರಂಭವಾಗಿದೆ.ಹೌದು....ಉಪ ಮುಖ್ಯ ಮಂತ್ರಿ ಡಿ.ಕೆಶಿವುಕುಮಾರ್ ಅವ್ರು ಬದಲಾವಣೆ ಮಾಡುವಂತೆ ಖಡಕ್ ಆಗಿದೆ ಆದೇಶ ನೀಡದ್ದಾರೆ ಎನ್ನಲಾಗಿದೆ.

*ಮೊದಲು ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನ ಬದಲವಾಣೆ ಮಾಡಿ ಹೊಸ ಅಧ್ಯಕ್ಷರನ್ನ ನೇಮಕ ಮಾಡಿ ಹಾಗೆ ಕಾರ್ಯ ಅಧ್ಯಕ್ಷರನ್ನ ನೇಮಕ ಮಾಡಿ ಎಂದು ಖಡಕ್ ಆದೇಶ ಮಾಡಿದ್ದಾರೆ*

 ಹೌದು....ಇನ್ನೂ ಆದೇಶ ಬರುತ್ತಿದ್ದಂತೇ ಅಧ್ಯಕ್ಷ ಸ್ಥಾನಕ್ಕೆ ಈಗ ಬಹಳ ಪೈಪೋಟಿ ನಡೆದಿದ್ದು, ಹುಬ್ಬಳ್ಳಿ ಧಾರವಾಡ ಜಿಲ್ಲೆಯಲ್ಲಿ ಆ ಸ್ಥಾನಗಳಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.ಇತ್ತ ಕಾರ್ಯಕರ್ತರು ತಮ್ಮ ನಾಯಕರನ್ನ ಮಾಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಅದರಂತೇ ಈಗ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಪ್ ಅಳ್ಳೂರ್ ಸ್ಥಾನಕ್ಕೆ ಪೈಪೋಟಿ ನಡೆದಿದ್ದು, ಮುಖಂಡ ರಜತ್ ಉಳ್ಳಾಗಡ್ಡಿ ಮಠ, ಇಮ್ರಾನ ಎಲಿಗಾರ,ಸದಾನಂದ ಡಂಗಣ್ಣವರ, ಜುಟ್ಟಲ್ ,ಸೇರಿದಂತೆ ಇತರರು ಪೈಪೋಟಿ ನಡೆಸಿದ್ದಾರೆ.

ಅದರಂತೆ ಗ್ರಾಮೀಣ ಜಿಲ್ಲಾಧ್ಯಕ್ಷ ಸ್ಥಾನಕ್ಕೂ ಹೆಚ್ಚಿನ ಪೈಪೋಟಿ ನಡೆದಿದ್ದು ಯಾರನ್ನ ಆಯ್ಕೆ ಮಾಡುತ್ತಾರೇ ಎಂಬುದನ್ನ ಕಾದು ನೋಡಬೇಕಿದೆ. ಇನ್ನೂ ಹುಬ್ಬಳ್ಳಿ ಧಾರವಾಡ ಮಹಾ ನಗರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ  ಹೆಚ್ಚಿನ ಸಂಘಟನೆ ಅವಶ್ಯಕತೆ ಇದೇ" ಯಾಕೆಂದರೆ ಇಲ್ಲಿ ಬಿಜೆಪಿ ಪ್ರಾಬಲ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎನ್ನಲಾಗಿದೆ. ಆದ್ದರಿಂದ ಯುವ ಮುಖಂಡರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕು ಎಂಬುದು ಕಾರ್ಯಕರ್ತರ ಒತ್ತಾಯ..

ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ‌ಪೈಪೊಟಿಯಲ್ಲಿರುವ ನಾಯಕರ ಲಿಸ್ಟ್!

1) ಸದಾನಂದ ಡಂಗಣ್ಣವರ)

2) ರಜತ್ ಉಳ್ಳಾಗಡ್ಡಿ ಮಠ

3) ನಾಗರಾಜ ಗೌರಿ

4)  ಚಂದ್ರಶೇಖರ ಜುಟ್ಟಲ್ 

5)ಇಮ್ರಾನ್ ಎಲಿಗಾರ

ಗ್ರಾಮೀಣ ಭಾಗಕ್ಕೂ ಸಹ ಪೈಪೋಟಿ ನಡೆದಿದ್ದು ಅನಿಲ ಕುಮಾರ್ ಪಾಟೀಲ್ ಅವರು ಗ್ರಾಮೀಣ ಭಾಗದಲ್ಲಿ  ಒಳ್ಳೆಯ ಸಂಘಟನೆ ಮಾಡಿದ್ದರು ಅದರಂತೆ ಮುಂದೇ ಆಯ್ಕೆಯಾಗುವ ಅಧ್ಯಕ್ಷರು ಅವರಂತೆ ಕೆಲಸ ಮಾಡಲಿ ಎಂದು ಕಾರ್ಯಕರ್ತರು ಮನವಿ ಮಾಡಿದ್ದಾರೆ.