ಶಾಸಕ ವಿನಯ್ ಕುಲಕರ್ಣಿ ಅವರನ್ನು ಹುಡುಕಿಕೊಂಡು ಬಂದ ಹಿರಿಯ ಜೀವಕ್ಕೆ ಆರ್ಥಿಕ ನೆರವು"

ಶಾಸಕ ವಿನಯ್ ಕುಲಕರ್ಣಿ ಅವರನ್ನು ಹುಡುಕಿಕೊಂಡು ಬಂದ ಹಿರಿಯ ಜೀವಕ್ಕೆ ಆರ್ಥಿಕ ನೆರವು"

ಧಾರವಾಡ: ಕಷ್ಟದಲ್ಲಿದ್ದ ಹಿರಿಯ ಜೀವವೊಂದು ಧಾರವಾಡ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿ ಅವರನ್ನು ಹುಡುಕಿಕೊಂಡು ಬಂದು ತನ್ನ ಸಂಕಷ್ಟವನ್ನು ಹೇಳಿಕೊಂಡಿತು. ಹಿರಿಯರ ನೋವು ಹಾಗೂ ಅಗತ್ಯವನ್ನು ಆಲಿಸಿದ ಶಾಸಕ ವಿನಯ್ ಕುಲಕರ್ಣಿ ಅವರು ತಕ್ಷಣ ಸ್ಪಂದಿಸಿ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು.

ತನ್ನ ಕಷ್ಟವನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬ ಆತಂಕದಲ್ಲಿದ್ದ ಹಿರಿಯ ಜೀವಕ್ಕೆ ಶಾಸಕ ವಿನಯ್ ಕುಲಕರ್ಣಿ ಅವರು ನೆರವಿನ ಹಸ್ತ ಚಾಚಿದರು. ಸಂಕಷ್ಟದಲ್ಲಿರುವವರಿಗೆ ಸಾಧ್ಯವಾದಷ್ಟು ನೆರವು ನೀಡಬೇಕು ಎಂಬ ಮಾನವೀಯ ಕಾಳಜಿಯೊಂದಿಗೆ ಹಿರಿಯರಿಗೆ ಹಣಕಾಸಿನ ಸಹಾಯ ಮಾಡಿದರು.

ಶಾಸಕರನ್ನು ಹುಡುಕಿಕೊಂಡು ಬಂದಿದ್ದ ಹಿರಿಯ ಜೀವಕ್ಕೆ ನೆರವು ದೊರೆತ ಕ್ಷಣ ಭಾವನಾತ್ಮಕವಾಗಿತ್ತು. ಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸಿ, ಅಗತ್ಯದ ಸಮಯದಲ್ಲಿ ನೆರವಾಗುವ ಮೂಲಕ ವಿನಯ್ ಕುಲಕರ್ಣಿ ಅವರು ಜನಪ್ರತಿನಿಧಿಯಾಗಿ ಮಾನವೀಯತೆಯ ಸಂದೇಶ ಸಾರಿದರು.

“ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಜನಪ್ರತಿನಿಧಿಯ ಕರ್ತವ್ಯ” ಎಂಬ ಮನೋಭಾವದೊಂದಿಗೆ ಹಿರಿಯ ಜೀವಕ್ಕೆ ನೆರವಾದ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ

ವರದಿ ಯಲ್ಲಪ್ಪಗೌಡ ಕುಂದಗೋಳ