ಭಕ್ತಿ, ಶ್ರದ್ಧೆಯೊಂದಿಗೆ ಸಿದ್ಧರೂಢರ ದರ್ಶನ ಪಡೆದ ಜಿಲ್ಲಾಧ್ಯಕ್ಷೆ ಗೌರಮ್ಮಾ ಬಲೋಗಿ

ಭಕ್ತಿ, ಶ್ರದ್ಧೆಯೊಂದಿಗೆ ಸಿದ್ಧರೂಢರ ದರ್ಶನ ಪಡೆದ ಜಿಲ್ಲಾಧ್ಯಕ್ಷೆ ಗೌರಮ್ಮಾ ಬಲೋಗಿ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೌರಮ್ಮಾ ಬಲೋಗಿ ಅವರ ಜನ್ಮದಿನದ ಅಂಗವಾಗಿ ಇಂದು ಶ್ರೀ ಸದ್ಗುರು ಸಿದ್ದರೂಢರ ಮಠಕ್ಕೆ ಭೇಟಿ ನೀಡಿ, ಶ್ರೀ ಸದ್ಗುರು ಸಿದ್ದರೂಢರ ದಿವ್ಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಮ್ಮ ಕುಟುಂಬದ ಸುಖ-ಶಾಂತಿ, ಜಿಲ್ಲೆ ಹಾಗೂ ರಾಜ್ಯದ ಜನರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ ಅವರು, ಎಲ್ಲರಿಗೂ ಆರೋಗ್ಯ, ನೆಮ್ಮದಿ ಮತ್ತು ಸಮೃದ್ಧಿ ಲಭಿಸಲಿ ಎಂದು ದೇವರಲ್ಲಿ ಬೇಡಿಕೊಂಡರು.

ಪೂಜೆಯ ಬಳಿಕ ಸಿದ್ದರೂಢರ ಆಶೀರ್ವಾದ ಪಡೆದ ಗೌರಮ್ಮಾ ಬಲೋಗಿ, ಸದ್ಗುರು ಸಿದ್ದರೂಢರ ಆಶೀರ್ವಾದದಿಂದ ಸಮಾಜಸೇವೆ ಮಾಡುವ ಶಕ್ತಿ ಇನ್ನಷ್ಟು ವೃದ್ಧಿಯಾಗಲಿ ಎಂದು ಪ್ರಾರ್ಥಿಸಿದರು.

 ಈ ವೇಳೆ ಮಠದ ಭಕ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು,ಮಹಿಳೆಯರು ಉಪಸ್ಥಿತರಿದ್ದರು.