ಪಿಆರ್‌ಎನ್ ಆಟೋಮೊಟಿವ್ಸ್‌ನಲ್ಲಿ ನೂತನ ಮಾರುತಿ ಸುಜುಕಿ ಬ್ರೆಜಾ ಕಾರು ಅನಾವರಣ: ಡಾ. ರಮೇಶ್ ಮಹಾದೇವಪ್ಪನವರಿಂದ ಚಾಲನೆ
ಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆಯಲ್ಲಿರುವ ಪಿಆರ್‌ಎನ್ ಆಟೋಮೊಟಿವ್ಸ್ ಶೋರೂಮ್‌ನಲ್ಲಿ ನೂತನ ಮಾರುತಿ ಸುಜುಕಿ ಬ್ರೆಜಾ ಕಾರಿನ ಅದ್ಧೂರಿ ಅನಾವರಣ ಕಾರ್ಯಕ್ರಮ ಭಾನುವಾರ ನಡೆಯಿತು.
ಉದ್ಯಮಿ ಹಾಗೂ ಸರ್ವಧರ್ಮ ಸಮಾಜ ಸೇವಕರಾದ ಡಾ. ರಮೇಶ್ ಮಹಾದೇವಪ್ಪನವರ ಅವರು ನೂತನ ಬ್ರೆಜಾ ಕಾರನ್ನು ಅನಾವರಣಗೊಳಿಸಿ ಮಾತನಾಡಿ, ಮಾರುತಿ ಸುಜುಕಿ ಕಂಪನಿಯ ಹೊಸ ಮಾದರಿಯ ವಾಹನಗಳು ಗ್ರಾಹಕರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದು, ಸುರಕ್ಷತೆ, ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಈ ವಾಹನ ಉತ್ತಮ ಸ್ಪಂದನೆ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ಉಮಾ ಮುಕುಂದ್, ಪಿಆರ್‌ಎನ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಕಾರ್ತಿಕ್ ನಾಯಕ್, ಹುಬ್ಬಳ್ಳಿ ಆರ್‌ಟಿಓ ಅಧಿಕಾರಿ ಶ್ರೀಕಾಂತ್ ಬಡಿಗೇರ್, ಆರ್‌ಟಿಓ ಇನ್ಸ್‌ಪೆಕ್ಟರ್ ಬೆಲ್ಲದ, ಪಿಆರ್‌ಎನ್ ಗ್ರೂಪ್‌ನ ಮಲ್ಲಿಕಾರ್ಜುನ್ ಬಾಗೇವಾಡಿ ಸೇರಿದಂತೆ ಗಣ್ಯರು, ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
ಹೊಸ ಬ್ರೆಜಾ ಕಾರಿನ ಅನಾವರಣದ ನಂತರ ಅತಿಥಿಗಳನ್ನು ಸನ್ಮಾನಿಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
yallu