ಹುಬ್ಬಳ್ಳಿ: ಬೈಕ್ ರ್ಯಾಲಿಗೆ ಡಾ.ರಮೇಶ್ ಚಾಲನೆ" ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿ ಗೆ ವಿಶೇಷ ನಮನ

ಹುಬ್ಬಳ್ಳಿ: ಬೈಕ್ ರ್ಯಾಲಿಗೆ ಡಾ.ರಮೇಶ್ ಚಾಲನೆ" ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿ ಗೆ ವಿಶೇಷ ನಮನ

ಹುಬ್ಬಳ್ಳಿ: 80ನೇ ಸ್ವಾತಂತ್ರ್ಯೋತ್ಸವ ಹಾಗೂ ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣನ ಜಯಂತಿಯ ಅಂಗವಾಗಿ ನಗರದಲ್ಲಿ ಭವ್ಯ ಬೈಕ್ ರ‍್ಯಾಲಿಯನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಯಿತು.

ರ‍್ಯಾಲಿಯಲ್ಲಿ ಸರ್ವಧರ್ಮ ಸಮಾಜದ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಪಾಲ್ಗೊಂಡು, ಶ್ರೀ ಜಗಜ್ಯೋತಿ ಬಸವೇಶ್ವರರ ಪುತ್ಥಳಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿ, ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಹಾಗೂ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮನ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಈ ವೇಳೆ ದೇಶಭಕ್ತಿ, ನಾಡಪ್ರೇಮ ಹಾಗೂ ಸ್ವಾಭಿಮಾನದ ಪ್ರತೀಕವಾಗಿರುವ ಮಹನೀಯರ ಆದರ್ಶಗಳನ್ನು ಸ್ಮರಿಸಲಾಯಿತು. ರಾಷ್ಟ್ರದ ಏಕತೆ, ಸಾಮಾಜಿಕ ಸಾಮರಸ್ಯ ಹಾಗೂ ದೇಶಪ್ರೇಮದ ಸಂದೇಶ ಸಾರುವ ಮೂಲಕ ಸ್ವಾತಂತ್ರ್ಯೋತ್ಸವ ಹಾಗೂ ರಾಯಣ್ಣ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸದಸ್ಯರಾದ ಶ್ರೀ ಪಿಕೆ ರಾಯನಗೌಡ್ರು, ಹೂವಪ್ಪ ದಾಯಗೋಡಿ, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಎಂ.ವೈ. ನರಗುಂದ, ಶಬೀರಪ್ಪ ಕಂಡೇಕರ್ ಸೇರಿದಂತೆ ಹಲವಾರು ದೇಶಪ್ರೇಮಿಗಳು, ಯುವ ಮಿತ್ರರು, ಹಿರಿಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ದೇಶಭಕ್ತಿ, ನಾಡಪ್ರೇಮ ಮತ್ತು ಮಹನೀಯರ ಆದರ್ಶಗಳೊಂದಿಗೆ ನಡೆದ ಈ ಭವ್ಯ ಬೈಕ್ ರ‍್ಯಾಲಿ ಸಾರ್ವಜನಿಕರ ಗಮನ ಸೆಳೆಯಿತು.