ಸಂಭ್ರಮದ ನಾಗರ ಪಂಚಮಿ: ಗೌರಮ್ಮಾ ಬಲೋಗಿ ನೇತೃತ್ವದಲ್ಲಿ ಮಹಿಳೆಯರಿಗೆ ಉಡಿ ತುಂಬುವ ವಿಶೇಷ ಕಾರ್ಯಕ್ರಮ
ಧಾರವಾಡ: ನಾಗರ ಪಂಚಮಿ ಹಬ್ಬದ ಅಂಗವಾಗಿ ಧಾರವಾಡದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿತ್ತು. ಹುಬ್ಬಳ್ಳಿ-ಧಾರವಾಡ ಮಹಾನಗರ ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಗೌರಮ್ಮಾ ಬಲೋಗಿ ಅವರ ನೇತೃತ್ವದಲ್ಲಿ ಧಾರವಾಡದ ಮೂರುಸಾವಿರ ಮಠದ ಆವರಣದಲ್ಲಿರುವ ದಾನಮ್ಮ ದೇವಿ ದೇವಸ್ಥಾನದ ಎದುರಿನ ನಾಗದೇವರ ಮೂರ್ತಿಗೆ ಹಾಲೆರೆಯುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಅದ್ಯಕ್ಷೇ ಗೌರಮ್ಮಾ ಬಲೋಗಿ ಅವರಯ ನೂರಾರು ಮಹಿಳೆಯರಿಗೆ ಅರಿಶಿಣ-ಕುಂಕುಮ ನೀಡಿ ಉಡಿ ತುಂಬಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿದರು.
ನಂತರ ಎಲ್ಲಾ ಮಹಿಳೆಯರು ಒಗ್ಗೂಡಿ ನಾಗದೇವರ ಮೂರ್ತಿಗೆ ಹಾಲೆರೆಯುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ನಾಗದೇವರು ಎಲ್ಲರಿಗೂ ಒಳಿತನ್ನು ಮಾಡಲಿ, ಪ್ರತಿಯೊಂದು ಕುಟುಂಬದಲ್ಲೂ ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಮತ್ತು ನೆಮ್ಮದಿ ನೆಲೆಸಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೌರಮ್ಮಾ ಬಲೋಗಿ, ನಾಗರ ಪಂಚಮಿ ಹಬ್ಬವು ಮಹಿಳೆಯರಿಗೆ ವಿಶೇಷವಾದ ಹಬ್ಬವಾಗಿದ್ದು, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿವೆ ಎಂದು ಹೇಳಿದರು.
ಇನ್ನು ಹಬ್ಬದ ಅಂಗವಾಗಿ ಮುತ್ತೈದೆ ಮಹಿಳೆಯರಿಗೆ ಉಡಿ ತುಂಬುವ ಮೂಲಕ ಅವರ ಜೀವನದಲ್ಲಿ ಸದಾ ಸಂತೋಷ, ಆರೋಗ್ಯ ಮತ್ತು ಸೌಭಾಗ್ಯ ನೆಲೆಸಲಿ ಎಂದು ಹಾರೈಸಿದರು. ಸಮಾಜದಲ್ಲಿ ಮಹಿಳೆಯರು ಪರಸ್ಪರ ಸಹೋದರತ್ವ ಮತ್ತು ಒಗ್ಗಟ್ಟಿನಿಂದ ಸಾಗಬೇಕು ಎಂಬ ಸಂದೇಶವನ್ನು ಕೂಡ ನೀಡಿದರು.

ನಾಗದೇವರಿಗೆ ಹಾಲೆರೆಯುವ ಮೂಲಕ ಎಲ್ಲರ ಒಳಿತಿಗಾಗಿ ಪ್ರಾರ್ಥಿಸಿದ ಮಹಿಳೆಯರು, “ಎಲ್ಲರ ಮನೆಗಳಲ್ಲೂ ಸುಖ-ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ನೆಲೆಸಲಿ” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಬಸ್ಸಮ್ಮ ಹೆಬ್ಬಳ್ಳಿ, ಮಾದೇವಿ ಬ್ಯಾಳಿ, ಸುನಂದಾ ಆಯಟ್ಟಿ,ಲಕ್ಷ್ಮಿ ಖಂಡಪ್ಪನವರ, ಸುವರ್ಣಾ ಕರಿಂಡಿ,ತೃಪ್ತಿ ಸೆಲರ್, ಮಂಜುಳಾ ತೋಟಗಿ, ಸುಶೀಲಾ ಹಿರೇಮಠ್, ಆಶಾ ಕದಂ, ಶೋಭಾ ಕರಿಸುಬ್ಬನವರ, ಸುರೇಖಾ ಸಂಕೇಶ್ವರಿ,ಭಾರತಿ,ಹಾಗೂ ಸುಜಾತ ಹೆಬ್ಬಳಿ,ಕಸ್ತೂರಿ ಹೆಬ್ಬಳ್ಳಿ,ಅನುರಾದ್ರ ಸಂಕನಗೌಡ್ರ
ಸೇರಿದಂತೆ ಇತರರು ಉಪಸ್ಥಿತರಿದ್ದರು.
ಒಟ್ಟಾರೆ,ಜಿಲ್ಲಾ ಅದ್ಯಕ್ಷೆ ಗೌರಮ್ಮಾ ಬಲೋಗಿ ಅವರ ನೇತೃತ್ವದಲ್ಲಿ ನಡೆದ ನಾಗರ ಪಂಚಮಿ ಆಚರಣೆ ಭಕ್ತಿ, ಸಂಪ್ರದಾಯ ಮತ್ತು ಮಹಿಳಾ ಒಗ್ಗಟ್ಟಿನ ಪ್ರತೀಕವಾಗಿ ಗಮನ ಸೆಳೆಯಿತು.
yallu