ಹೈದರಾಬಾದ್ನಲ್ಲಿ ಡಾ. ರಮೇಶ್ ಮಹಾದೇವಪ್ಪನವರಿಗೆ "ಡಿಸ್ಟ್ರಿಕ್ಟ್ ಸೇಲ್ಸ್ ಟಾಪರ್ ಅವಾರ್ಡ್" ಗೌರವ!
ಹೈದರಾಬಾದ್ನಲ್ಲಿ ಡಾ. ರಮೇಶ್ ಮಹಾದೇವಪ್ಪನವರಿಗೆ "ಡಿಸ್ಟ್ರಿಕ್ಟ್ ಸೇಲ್ಸ್ ಟಾಪರ್ ಅವಾರ್ಡ್" ಗೌರವ
ಹುಬ್ಬಳ್ಳಿ: ಶ್ರೀ ಸಿಮೆಂಟ್ ವತಿಯಿಂದ ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ದೂರಿಯಾಗಿ ಆಯೋಜಿಸಲಾದ "ಸಮೃದ್ಧಿ ಉತ್ಸವ" ಕಾರ್ಯಕ್ರಮದಲ್ಲಿ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅವಕಾಶ ದೊರೆತಿದ್ದು, ಅದನ್ನು ತಮ್ಮ ಜೀವನದ ಹೆಮ್ಮೆಯ ಕ್ಷಣವೆಂದು ಅವರು ಅಭಿವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆಗಾಗಿ ಅವರಿಗೆ ಪ್ರತಿಷ್ಠಿತ "ಡಿಸ್ಟ್ರಿಕ್ಟ್ ಸೇಲ್ಸ್ ಟಾಪರ್ ಅವಾರ್ಡ್ (District Sales Topper Award)" ನೀಡಿ ಗೌರವಿಸಲಾಯಿತು.
ಈ ಗೌರವವನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಡಾ. ರಮೇಶ್ ಮಹಾದೇವಪ್ಪನವರು, “ಇದು ನನ್ನೊಬ್ಬನ ಸಾಧನೆಯಲ್ಲ. ನನ್ನ ಮೇಲೆ ವಿಶ್ವಾಸವಿಟ್ಟು ಸದಾ ಬೆಂಬಲವಾಗಿ ನಿಂತಿರುವ ಸಹೋದ್ಯೋಗಿಗಳು, ಡೀಲರ್ ಬಂಧುಗಳು, ಗ್ರಾಹಕರು, ಕುಟುಂಬದವರು ಹಾಗೂ ಶುಭ ಹಾರೈಸಿದ ಎಲ್ಲರ ಪ್ರೀತಿ, ಪ್ರೋತ್ಸಾಹ ಮತ್ತು ಸಹಕಾರದ ಪ್ರತಿಫಲವಾಗಿದೆ. ನಿಮ್ಮೆಲ್ಲರ ವಿಶ್ವಾಸವೇ ನನ್ನ ಯಶಸ್ಸಿನ ಮೂಲಾಧಾರ. ಇದೇ ಪ್ರೋತ್ಸಾಹದೊಂದಿಗೆ ಮುಂದೆಯೂ ಇನ್ನಷ್ಟು ಉತ್ತಮ ಸಾಧನೆ ಮಾಡಲು ಶ್ರಮಿಸುತ್ತೇನೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮುಖ್ಯಸ್ಥರಾದ ಶ್ರೀ ಚನ್ನಬಸಪ್ಪ ಬುಮಾ, ಶ್ರೀ ಅರುಣ್ ಪಾಟೀಲ್, ಶ್ರೀ ರಮೇಶ್ ಪಾಟೀಲ್, ಶ್ರೀ ವಿಶ್ವನಾಥ್ ಪ್ಯಾಟಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶ್ರೀ ಸಿಮೆಂಟ್ ಸಂಸ್ಥೆಯ ಡೀಲರ್ಗಳು ಹಾಗೂ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಈ ಗೌರವಕ್ಕೆ ಕಾರಣರಾದ ಸಿಮೆಂಟ್ ಸಂಸ್ಥೆಯ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು, ಡೀಲರ್ ಬಂಧುಗಳು, ಗ್ರಾಹಕರು ಹಾಗೂ ತಮ್ಮ ಕುಟುಂಬದ ಎಲ್ಲ ಸದಸ್ಯರಿಗೆ ಡಾ. ರಮೇಶ್ ಮಹಾದೇವಪ್ಪನವರು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.
yallu