ಧಾರವಾಡ ಗ್ರಾಮೀಣ ಕ್ಷೇತ್ರದ ಬಿಎಲ್‌ಎಗಳಿಗೆ ಎಸ್‌ಐಆರ್ ಕಾರ್ಯಾಗಾರ ಯಶಸ್ವಿ!

ಧಾರವಾಡ ಗ್ರಾಮೀಣ ಕ್ಷೇತ್ರದ ಬಿಎಲ್‌ಎಗಳಿಗೆ ಎಸ್‌ಐಆರ್ ಕಾರ್ಯಾಗಾರ ಯಶಸ್ವಿ!


ಧಾರವಾಡ: ಧಾರವಾಡ 71 ವಿಧಾನಸಭಾ ಕ್ಷೇತ್ರದ ಬಿಎಲ್‌ಎ (BLA-1) ಗಳಿಗಾಗಿ ಆಯೋಜಿಸಿದ್ದ ಎಸ್‌ಐಆರ್ ತಿಳುವಳಿಕೆ ಕಾರ್ಯಾಗಾರ ನಗರದ ಜಯನಗರದ ಲಿಂಗಾಯತ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.

 ಕಾಂಗ್ರೆಸ್ ಯುವ ನಾಯಕಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಅವ್ರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ಷೇತ್ರದ ಪ್ರತಿಯೊಬ್ಬ ಬಿಎಲ್‌ಎ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ಬಿಎಲ್‌ಒಗಳ ಸಹಯೋಗದೊಂದಿಗೆ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಂತೆ ಕರೆ ನೀಡಿದರು.

ಬೆಂಗಳೂರು ಮೂಲದ ಜಾಗೃತ ಕರ್ನಾಟಕ ಸಂಘದ ಪರಿಣಿತ ತಂಡವು ಎಲ್‌ಇಡಿ ಸ್ಕ್ರೀನ್ ಮೂಲಕ ಎಸ್‌ಐಆರ್ ಹಾಗೂ ಬಿಎಲ್‌ಎಗಳ ಕರ್ತವ್ಯಗಳ ಕುರಿತು ಸವಿಸ್ತಾರ ಮಾಹಿತಿ ಮತ್ತು ತರಬೇತಿ ನೀಡಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಕಾರ್ಯಾಗಾರದ ಉದ್ದೇಶ ವಿವರಿಸಿ  ಬಿಎಲ್‌ಎಗಳ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಚನ್ನಬಸಪ್ಪ ಮಟ್ಟಿ, ನಂದೀಶ ನಾಯ್ಕರ, ಪಾರಿಸ್ ಪತ್ರಾವಳಿ, ಹುಬ್ಬಳ್ಳಿ ಧಾರವಾಡ ಮಹಾನಗರ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೌರಮ್ಮ ಬಲೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಗನಗೌಡ್ರ,  ಮಹಾನಗರ ಪಾಲಿಕೆ ಸದಸ್ಯರಾದ ಪ್ರಕಾಶ ಘಾಟಗೆ, ರಾಜಶೇಖರ ಕಮತಿ, ದೀಪಾ ನೀರಲಕಟ್ಟಿ, ಸೂರವ್ವ ಪಾಟೀಲ, ರೇಣುಕಾ ಕಳ್ಳಿಮನಿ, ಈರಣ್ಣ ಹಸಬಿ, ಬಸವರಾಜ ಹೆಬ್ಬಳ್ಳಿ, ವಿನಯ ಬಾಬರ, ಕರೆಪ್ಪ ಮಾದರ ಸೇರಿದಂತೆ ನೂರಾರು ಬಿಎಲ್‌ಎಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.