ಹುಬ್ಬಳ್ಳಿಯಲ್ಲಿ ಸಂತ ಶ್ರೀ ಶಿಶುನಾಳ ಶರೀಫ ಶಿವಯೋಗಿಗಳ 207ನೇ ಜಯಂತಿ: ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಡಾ. ರಮೇಶ್ ಮಹಾದೇವಪ್ಪನವರ ಚಾಲನೆ
ಹುಬ್ಬಳ್ಳಿಯಲ್ಲಿ ಸಂತ ಶ್ರೀ ಶಿಶುನಾಳ ಶರೀಫ ಶಿವಯೋಗಿಗಳ 207ನೇ ಜಯಂತಿ: ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಡಾ. ರಮೇಶ್ ಮಹಾದೇವಪ್ಪನವರ ಚಾಲನೆ
ಹುಬ್ಬಳ್ಳಿ: ನಗರದ ಸಿದ್ಧಾರೂಢ ಮಠದ ಯಾತ್ರಿ ನಿವಾಸದಲ್ಲಿ ಶ್ರೀ ಕಾಲಕಾಲೇಶ್ವರ ಕಲಾ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಸಹಯೋಗದಲ್ಲಿ ಸಂತ ಶ್ರೀ ಶಿಶುನಾಳ ಶರೀಫ ಶಿವಯೋಗಿಗಳ 207ನೇ ಜಯಂತಿ ಉತ್ಸವದ ಅಂಗವಾಗಿ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಉದ್ಘಾಟಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರನ್ನು ಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಕಲ್ಯಾಣಪುರ-ಕುಂದಗೋಳದ ಶ್ರೀ ಮ.ನಿ.ಪ್ರ. ಅಭಿನವ ಬಸವಣ್ಣಜ್ಜನವರ ದಿವ್ಯ ಸಾನಿಧ್ಯ ಲಭಿಸಿದ್ದು, ಕಾರ್ಯಕ್ರಮದ ಗೌರವವನ್ನು ಮತ್ತಷ್ಟು ಹೆಚ್ಚಿಸಿತು.
ಈ ಸಂದರ್ಭದಲ್ಲಿ ಶ್ರೀಮತಿ ಲೀಲಾಂಬಿಕ ತುಪ್ಪದಗೌಡ, ಶ್ರೀ ಎಸ್.ಎಸ್. ಪಾಟೀಲ್, ಶ್ರೀ ಗಂಗಾಧರ್ ದೊಡ್ಡವಾಡ, ಶ್ರೀ ಅಶೋಕ್ ಗಾಣದಾಳ್, ಶ್ರೀ ಬಸವರಾಜ ಕೋಲೇರಿ ಸೇರಿದಂತೆ ಸಂಸ್ಥೆಯ ಸರ್ವ ಸದಸ್ಯರು, ಗಣ್ಯರು ಹಾಗೂ ಅಪಾರ ಸಂಖ್ಯೆಯ ಕಲಾಭಿಮಾನಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
ಸಭೆಯಲ್ಲಿ ಮಾತನಾಡಿದ ಗಣ್ಯರು, ಸಂತ ಶ್ರೀ ಶಿಶುನಾಳ ಶರೀಫ ಶಿವಯೋಗಿಗಳ ಮಾನವೀಯತೆ, ಸಾಮರಸ್ಯ, ಭಕ್ತಿ ಹಾಗೂ ಸಾಮಾಜಿಕ ಸೌಹಾರ್ದತೆಯ ಸಂದೇಶಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಿಯಾಗಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕೊನೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ಗಣ್ಯರು, ಕಲಾವಿದರು ಹಾಗೂ ಭಾಗವಹಿಸಿದ ಸಾರ್ವಜನಿಕರಿಗೆ ಸಂಸ್ಥೆಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
yallu