ಸಿದ್ದಕಲ್ಯಾಣ ನಗರದಲ್ಲಿ ಅದ್ದೂರಿ ಗಣೇಶೋತ್ಸವಕ್ಕೆ ಸಜ್ಜು: ಧ್ವಜಸ್ತಂಭ ಸ್ಥಾಪನೆಗೆ ಡಾ. ರಮೇಶ್ ಚಾಲನೆ
ಸಿದ್ದಕಲ್ಯಾಣ ನಗರದಲ್ಲಿ ಅದ್ದೂರಿ ಗಣೇಶೋತ್ಸವಕ್ಕೆ ಸಜ್ಜು: ಧ್ವಜಸ್ತಂಭ ಸ್ಥಾಪನೆಗೆ ಡಾ. ರಮೇಶ್ ಚಾಲನೆ
ಹುಬ್ಬಳ್ಳಿ: ನಗರದ ಉಣಕಲ್ಲ ಸಿದ್ದಕಲ್ಯಾಣ ನಗರದಲ್ಲಿ ಗಣೇಶೋತ್ಸವದ ಸಂಭ್ರಮಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಗಣೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ಧ್ವಜಸ್ತಂಭ ಸ್ಥಾಪನಾ ಕಾರ್ಯಕ್ರಮವು ಧಾರ್ಮಿಕ ಭಕ್ತಿಭಾವದೊಂದಿಗೆ ನೆರವೇರಿತು.
ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಅವರು ಧ್ವಜಸ್ತಂಭ ಸ್ಥಾಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ವಿಘ್ನವಿನಾಯಕ ಶ್ರೀ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದು ಕೃಪಾಶೀರ್ವಾದ ಪಡೆದರು.
ಗಣೇಶೋತ್ಸವವು ಸಮಾಜದಲ್ಲಿ ಭಕ್ತಿ, ಶಾಂತಿ, ಸೌಹಾರ್ದತೆ ಹಾಗೂ ಒಗ್ಗಟ್ಟಿನ ಸಂದೇಶ ಸಾರುವ ಹಬ್ಬವಾಗಿದ್ದು, ಸಿದ್ದಕಲ್ಯಾಣ ನಗರದಲ್ಲಿ ಪ್ರತಿವರ್ಷವೂ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಈ ಬಾರಿಯೂ ಉತ್ಸವವನ್ನು ಸಂಭ್ರಮದಿಂದ ಆಚರಿಸಲು ಸ್ಥಳೀಯರು ಸಿದ್ಧತೆ ನಡೆಸಿದ್ದಾರೆ.
ಕಾರ್ಯಕ್ರಮದಲ್ಲಿ ರಾಜೇಶ ಮಹಾದೇವಪ್ಪನವರ, ಪ್ರವೀಣ ಪತ್ತಾರ, ಮಂಜು ಕಮ್ಮಾರ್, ಉದಯ ದೇಸಾಯಿ, ಪ್ರಸಾದ್ ಬೆಟಸೂರ, ನಾರಾಯಣ ಬಡಿಗೇರ, ಈರಣ್ಣ ತೊರಗಲಮಠ, ಆನಂದ ನಾಯಕ, ಕಲ್ಲಪ್ಪ ಶಿರಕೋಳ, ಲಿಂಬಿಕಾಯಿ, ದಳವೆನ್ನವರ, ರಾಜು ಇಜಾರ್ ಸೇರಿದಂತೆ ಗಣ್ಯರು, ಸ್ಥಳೀಯ ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಧ್ವಜಸ್ತಂಭ ಸ್ಥಾಪನೆಯೊಂದಿಗೆ ಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಅಧಿಕೃತವಾಗಿ ಚಾಲನೆ ದೊರೆತಿದ್ದು, ಮುಂದಿನ ದಿನಗಳಲ್ಲಿ ವಿವಿಧ ಪೂಜಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
yallu