ಕರ್ನಾಟಕ ಪಬ್ಲಿಕ್ ಸ್ಕೂಲ್ ಗೋಪನಕೊಪ್ಪ ಪ್ರಾಥಮಿಕ ವಿಭಾಗದಲ್ಲಿ ಡಾ. ರಮೇಶ್ ಮಹಾದೇವಪ್ಪನವರ ಜನ್ಮದಿನ ಆಚರಣೆ!
ಹುಬ್ಬಳ್ಳಿ: ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಅವರ ಜನ್ಮದಿನವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್, ಗೋಪನಕೊಪ್ಪದಲ್ಲಿರುವ ಸರ್ಕಾರಿ ಶಾಲೆಯಲ್ಲಿ ವಿಶೇಷವಾಗಿ ಆಚರಿಸಲಾಯಿತು.
ತಾವು ವಿದ್ಯಾಭ್ಯಾಸ ಮಾಡಿದ ಶಾಲೆಯಲ್ಲಿಯೇ ಮಕ್ಕಳೊಂದಿಗೆ ಜನ್ಮದಿನ ಆಚರಿಸಿಕೊಂಡ ಡಾ. ರಮೇಶ್ ಮಹಾದೇವಪ್ಪನವರ ಅವರು ವಿದ್ಯಾರ್ಥಿಗಳೊಂದಿಗೆ ಸಂತಸ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಮೇಶ್ ಮಹಾದೇವಪ್ಪನವರ ಅವರು, "ತಂದೆ-ತಾಯಿ ಹಾಗೂ ಗುರುಗಳು ಮಾತ್ರ ಪ್ರತಿಯೊಬ್ಬರ ಏಳಿಗೆ ಮತ್ತು ಉತ್ತಮ ಭವಿಷ್ಯವನ್ನು ಸದಾ ಬಯಸುತ್ತಾರೆ. ಅವರ ಮಾರ್ಗದರ್ಶನ ಮತ್ತು ಆಶೀರ್ವಾದವೇ ಜೀವನದ ಯಶಸ್ಸಿಗೆ ಅಡಿಪಾಯ" ಎಂದು ಹೇಳಿದರು.
ಬಳಿಕ ಡಾ.ರಮೇಶ್ ಹಾಗೂ ಧರ್ಮಪತ್ನಿ ಗೀತಾ ರಮೇಶ್ ಅವರಿಗೆ ಸನ್ಮಾನ ಮಾಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯ ಎಂ.ವೈ. ನರಗುಂದ, ಗೀತಾ ರಮೇಶ್ ಮಹಾದೇವಪ್ಪನವರ, ವಾಯ್ ಎಚ್.ಬಣವಿ,ಶಿಕ್ಷಕರಾದ ವಿಎಫ್ ಚುಳುಕಿ, ರಾಚನಗೌಡ್ರ ,ಚಂದ್ರಫ್ಪ, ಶ್ರೀಮತಿ . ಆರ್ ,ಎಚ್.ನಿಡಗುಂದಿ, ಎನ್.ಎಸ್ ಬಾದಮಿ, ಆನಂದ ಶಿರಗುಂತಿ,ಸೇರಿದಂತೆ ಶಾಲೆಯ ಶಿಕ್ಷಕರು
ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಡಾ. ರಮೇಶ್ ಮಹಾದೇವಪ್ಪನವರ ಅವರಿಗೆ ಶುಭ ಹಾರೈಸಿದರು.
ಈ ವಿಶೇಷ ಆಚರಣೆ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಮಹತ್ವ, ಗುರುಗಳ ಗೌರವ ಹಾಗೂ ಸಮಾಜಸೇವೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನೆರವಾಯಿತು..
yallu