ವಿದ್ಯಾನಗರದಲ್ಲಿ “ನಂದಿನಿ ಪಿ.ಜಿ. ಮತ್ತು ಮೆಸ್” ಶುಭಾರಂಭ | ಡಾ. ರಮೇಶ್ ಮಹಾದೇವಪ್ಪನವರಿಂದ ಶುಭ ಹಾರೈಕೆ

ವಿದ್ಯಾನಗರದಲ್ಲಿ “ನಂದಿನಿ ಪಿ.ಜಿ. ಮತ್ತು ಮೆಸ್” ಶುಭಾರಂಭ | ಡಾ. ರಮೇಶ್ ಮಹಾದೇವಪ್ಪನವರಿಂದ ಶುಭ ಹಾರೈಕೆ

ಹುಬ್ಬಳ್ಳಿ:- ವಿದ್ಯಾನಗರದ ಸಿದ್ದೇಶ್ವರ ಪಾರ್ಕ್‌ನಲ್ಲಿ ನೂತನವಾಗಿ ಆರಂಭಗೊಂಡಿರುವ “ನಂದಿನಿ ಪಿ.ಜಿ. ಮತ್ತು ಮೆಸ್” ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಬಿಜೆಪಿ ಮುಖಂಡ ಅಶೋಕ ವಾಲ್ಮೀಕಿ ಅವರ ಸುಪುತ್ರರಾದ ಶ್ರೀ ಮನೋಜ್ ವಾಲ್ಮೀಕಿ ಅವರು ನೂತನವಾಗಿ ಆರಂಭಿಸಿದ ಈ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರು ಪಾಲ್ಗೊಂಡು, ಸಂಸ್ಥೆಯ ಯಶಸ್ಸಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾಜಿ ಉಪಮಹಾಪೌರರಾದ ಶ್ರೀ ಸಂತೋಷ್ ಚವ್ಹಾಣ, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಎಂ.ವೈ. ನರಗುಂದ, ಬೀರಪ್ಪ ಖಂಡೇಕರ, ರಾಜು ಕಾಳೆ, ಶ್ರೀ ಈಶ್ವರಗೌಡ ಪಾಟೀಲ, ವೆಂಕಟೇಶ ಚಚಡಿ, ಬಸವರಾಜ ಹೊರಟ್ಟಿ, ಗುರುಸಿದ್ಧ ಗುಡಗುಂಟಿ, ಸತೀಶ್ ಬೊಮ್ಮನಹಳ್ಳಿ, ರವಿ ಮಳಗಿ,  ಆನಂದ್ ಬೆಂಗೇರಿ ಸೇರಿದಂತೆ ಅನೇಕ ಗಣ್ಯರು, ಆತ್ಮೀಯರು ಹಾಗೂ ಸ್ನೇಹಿತರು ಉಪಸ್ಥಿತರಿದ್ದರು.

ನೂತನವಾಗಿ ಆರಂಭಗೊಂಡಿರುವ “ನಂದಿನಿ ಪಿ.ಜಿ. ಮತ್ತು ಮೆಸ್” ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರಿಗೆ ಉತ್ತಮ ವಸತಿ ಮತ್ತು ಊಟದ ಸೌಲಭ್ಯ ಒದಗಿಸುವ ಮೂಲಕ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಗಣ್ಯರು ಶುಭ ಹಾರೈಸಿದರು.