ವಿವಿಧ ದೇವಸ್ಥಾನಗಳಿಗೆ ಡಾ.ರಮೇಶ್ ಹಾಗೂ ಧರ್ಮಪತ್ನಿ ಭೇಟಿ ವಿಶೇಷ ಪೂಜೆ!
ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಡಾ. ರಮೇಶ್ ಮಹಾದೇವಪ್ಪನವರ
ಹುಬ್ಬಳ್ಳಿ: ತಮ್ಮ ಜನ್ಮದಿನ ನಿಮಿತ್ತವಾಗಿ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಹಾಗೂ ಅವರ ಧರ್ಮಪತ್ನಿ ಗೀತಾ ರಮೇಶ್ ಅವರು ಹುಬ್ಬಳ್ಳಿಯ ಉಣಕಲ್ಲದ ಶ್ರೀ ಗಣೇಶ ದೇವಸ್ಥಾನ, ಶ್ರೀ ಸಿದ್ದಪ್ಪಜ್ಜನ ದೇವಸ್ಥಾನ, ಬೆಂಗೇರಿಯ ಗ್ರಾಮ ದೇವತಾ ದೇವಸ್ಥಾನ, ಶ್ರೀ ಮಾರುತಿ ದೇವಸ್ಥಾನ, ಶ್ರೀ ಗಾಯತ್ರಿ ದೇವಸ್ಥಾನ, ದೇವಾಂಗಪೇಟೆಯ ಶ್ರೀ ಆಂಜನೇಯ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ದಂಪತಿಗಳು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ರಾಜ್ಯದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಹಾಗೂ ಜನರ ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿ ಇರಲೆಂದು ದೇವರಲ್ಲಿ ಪ್ರಾರ್ಥಿಸಿದರು.
ಬಳಿಕ ಮಾತನಾಡಿದ ಡಾ. ರಮೇಶ್ ಮಹಾದೇವಪ್ಪ ಅವರು, ಸಮಾಜದಲ್ಲಿ ಸೌಹಾರ್ದತೆ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳು ಇನ್ನಷ್ಟು ಬಲಗೊಳ್ಳಬೇಕಿದ್ದು, ಎಲ್ಲರಿಗೂ ಒಳಿತಾಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಹೇಳಿದರು.
ಬಳಿಕ ಎಲ್ಲಾ ಸ್ನೇಹಿತರಿಗೆ, ಹಾಗೂ ಮುಖಂಡರಿಗೆ ವಿಶೇಷವಾಗಿ ದೇವಸ್ಥಾನಗಳ ಕಮಿಟಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಭಕ್ತಾದಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
yallu