ದೇಶದ ಭವಿಷ್ಯ ಬದಲಿಸುವ ಯುವ ಶಕ್ತಿ : ಡಾ.ಪ್ರಸಾದ

ದೇಶದ ಭವಿಷ್ಯ ಬದಲಿಸುವ ಯುವ ಶಕ್ತಿ : ಡಾ.ಪ್ರಸಾದ

ಹುಬ್ಬಳ್ಳಿ : ವಿಶ್ವಕ್ಕೆ ಯುವ ಶಕ್ತಿಯ ಮಹತ್ವ ಸಾರಿದ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಮಕ್ಕಳು ಮೈಗೂಡಿಸಿಕೊಂಡು ದೊಡ್ಡ ಸಾಧನೆ ಮಾಡಬೇಕು ಎಂದು ಸ್ವರ್ಣ ಸಮೂಹದ ಚೇರಮನ್ ಡಾ.ಚಿಗರುಪಾಟಿ ವಿ.ಎಸ್.ವಿ.ಪ್ರಸಾದ ಹೇಳಿದರು. 
ವಿವೇಕಾನಂದ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಶನ್ ವತಿಯಿಂದ ನಡೆದ ಸ್ವಾಮಿ ವಿವೇಕಾನಂದರ ೧೬೪ನೆ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯುವ ಶಕ್ತಿ ದೇಶದ ಭವಿಷ್ಯವನ್ನೇ ಬದಲಿಸಬಲ್ಲದು ಅಲ್ಲದೇ ಶೀಘ್ರ ಭಾರತ ವಿಶ್ವಗುರುವಾಗುವುದರಲ್ಲಿ ಸಂಶಯವಿಲ್ಲ ಎಂದರು .
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ದಿ ಪ್ರಾದಿಕಾರದ ಅಧ್ಯಕ್ಷ ಶಾಕಿರ್ ಸನದಿ ಮಾಧುರ್ಯತೆ, ಔದಾರ್ಯತೆ, ಪವಿತ್ರತೆ ,ಎಲ್ಲಕ್ಕಿಂತ ಹೆಚ್ಚಾಗಿ ಧ್ಯಾನ ಮತ್ತು ಅಂತರ್ಮುಖ ಜೀವನದಲ್ಲಿ ಪರಾಕಾಷ್ಟೆಯನ್ನು ಹೊಂದಿದ ದೇಶ ಭಾರತವಾಗಿದ್ದು, ನಮ್ಮ ಯುವಕರು ಬಲಶಾಲಿಗಳಾಗಬೇಕು.ಅವರು ಧೈರ್ಯವಾಗಿ ತಮ್ಮ ಕಾಲ ಮೇಲೆ ನಿಲ್ಲುವುದನ್ನು ಕಲಿತರೆ ಯಶಸ್ಸು ನಿಶ್ಚಿತ ಎಂಬ ವಿವೇಕಾನಂದರ ಮಾತು ನಮೆಗಲ್ಲರಿಗೂ ಆದರ್ಶ ಎಂದರು. 
ಅಸೋಸಿಯೇಶನ್ ಅಧ್ಯಕ್ಷ ಗಣಪತಿ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಎನ್.ಎಲ್.ಇ ಸೊಸೈಟಿ ಉಪಾಧ್ಯಕ್ಷ ಶಿವರಾಮ ಹೆಗಡೆ, ಕಾಮತ್ ಹೊಟೆಲ್ ಸಮೂಹದ ಉದ್ಯಮಿ ಸದಾನಂದ ಕಾಮತ್ ವೇದಿಕೆ ಮೇಲಿದ್ದರು. ಇದೇ ಸಂದರ್ಭದಲ್ಲಿ ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ವಿಜೇತ ಮಕ್ಕಳಿಗೆ ವಿವೇಕಾನಂದ ಪ್ರಶಸ್ತಿ ನೀಡಿ ಗೌರವಿಸಲಾಇತು.
ಕಾರ್ಯದರ್ಶಿ ಗುರುರಾಜ ಕುಲಕರ್ಣಿ ನಿರೂಪಿಸಿದರು. ಮಾಜಿ ಅಧ್ಯಕ್ಷ ರಾಜೇಂದ್ರಕುಮಾರ್, ಪದಾಧಿಕಾರಿಗಳಾದ ಐ.ವಾಯ್.ಚಂದ್ರಶೇಖರ್ ಒ, ನಾಗರಾಜ್, ರವೀಂದ್ರ ರಾಮದುರ್ಗಕರ್ ಹಾಗೂ ಇತರ ಸದಸ್ಯರಿದ್ದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳ ನೃತ್ಯ ಗಮನ ಸೆಳೆಯಿತು.