ಡಾ.ರಮೇಶ್ ಮಹಾದೇವಪ್ಪನವರಗೆ "ಧೀಮಂತ ಪ್ರಶಸ್ತಿ" ಪ್ರದಾನ
ನಾಳೆ ಸಮಾಜ ಸೇವಕ ಡಾ. ಮಹಾದೇವಪ್ಪನವರಿಗೆ ಧೀಮಂತ ಸನ್ಮಾನ ಪ್ರಶಸ್ತಿ ಪ್ರದಾನ
ಹುಬ್ಬಳ್ಳಿ:- ಕರ್ನಾಟಕ ರಾಜ್ಯೋತ್ಸವ ನಿಮಿತ್ತವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಕೊಡ ಮಾಡುವ ಧೀಮಂತ ಸನ್ಮಾನ ಪ್ರಶಸ್ತಿಗೆ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರು ಆಯ್ಕೆಯಾಗಿದ್ದಾರೆ.
ಅವರ ಅಮೋಘ ಸಮಾಜ ಸೇವೆಯನ್ನು ಗುರುತಿಸಿ ಮಹಾನಗರ ಪಾಲಿಕೆಯು ಪ್ರಶಸ್ತಿ ಪ್ರಕಟಿಸಿದ್ದು, ನಾಳೆ ನವೆಂಬರ್ ೧ ಕರ್ನಾಟಕ ರಾಜ್ಯೋತ್ಸವದಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮಹಾದೇವಪ್ಪನವರಿಗೆ ಧೀಮಂತ ಸನ್ಮಾನ ಪ್ರಶಸ್ತಿ ಪುರಸ್ಕಾರ ಮಾಡಿ ಸತ್ಕರಿಸಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
yallu