ಹುಬ್ಬಳ್ಳಿಯಲ್ಲಿ ವರ್ಗಾವಣೆ ಆದ್ರೂ ಅಧಿಕಾರ ಸಿಗದೇ ಪೊಲೀಸ್ ಇನ್ಸ್ಪೆಕ್ಟರ್ ಪರದಾಟ "ಪ್ರಭಾವಿ ರಾಜಕಾರಣಿ ಕೈವಾಡ? ಶಂಕೆ

ಹುಬ್ಬಳ್ಳಿಯಲ್ಲಿ ವರ್ಗಾವಣೆ ಆದ್ರೂ ಅಧಿಕಾರ ಸಿಗದೇ ಪೊಲೀಸ್ ಇನ್ಸ್ಪೆಕ್ಟರ್ ಪರದಾಟ "ಪ್ರಭಾವಿ ರಾಜಕಾರಣಿ ಕೈವಾಡ? ಶಂಕೆ

ಹುಬ್ಬಳ್ಳಿ: ವರ್ಗಾವಣೆಯಾದರೂ ನಿಯುಕ್ತಿಗೆ ಅವಕಾಶ ಸಿಗದೇ ಪೊಲೀಸ್ ಇನ್ಸ್​ಪೆಕ್ಟರ್​ ಪರದಾಟ.

ಹೌದು, ಧಾರವಾಡ ಜಿಲ್ಲೆಯ ಕೆಲ ಜನಪ್ರತಿನಿಧಿಗಳು, ನಾಯಕರ ಒಳಜಗಳ ಮತ್ತು ತಿಕ್ಕಾಟದಿಂದ ಕೆಲಸಕ್ಕೆ ಹಾಜರಾಗಲು ಪೊಲೀಸ್ ಇನ್ಸ್ಪೆಕ್ಟರ್ ಗಳು ಪರದಾಡುವಂತಾಗಿದೆ. ನ್ಯಾಯ ಕೊಡಿಸುವ ಕೆಲಸ ಮಾಡುವ ಇನ್ಸ್ಪೆಕ್ಟರ್​​ಗಳೇ ಇದೀಗ ನ್ಯಾಯಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಅದರಂತೆ ಕಲಘಟಗಿ ಕ್ಷೇತ್ರದ ಮಣ್ಣಿನ ಮಗನಿಗೆ ಸ್ಥಳೀಯ ಪ್ರಭಾವಿ ರಾಜಕಾರಣಿಯಿಂದ ಅನ್ಯಾಯಕ್ಕೊಳಗಾಗಿದ್ದಾರೆ ಎಂಬ ಆರೋಪ ಇದೀಗ ಜಿಲ್ಲೆಯಲ್ಲಿ ಗುಸು ಗುಸು ಮಾತುಗಳು ಕೇಳಿ ಬರುತ್ತಿದೆ.

*ಪ್ರತಿಷ್ಠಿತ ಕಣವಾದ ಗೋಕುಲ್ ರೋಡ್ ಪೋಲಿಸ್ ಠಾಣೆ:*

ಕಲಘಟಗಿ ತಾಲೂಕಿನ ಬೇಗೂರ್ ಗ್ರಾಮದ ಶಿವರುದ್ರಪ್ಪ ಮೇಟಿ ಅವರು ಕರ್ನಾಟಕ ಲೋಕಾಯುಕ್ತದಿಂದ ಹುಬ್ಬಳ್ಳಿಯ ಗೋಕುಲ್ ರಸ್ತೆಯ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಸುಮಾರು 15ದಿನಗಳು ಕಳೆದರೂ ಸಹಿತ ಇದುವರೆಗೂ ಅಧಿಕಾರ ಸ್ವೀಕಾರ ಮಾಡದೇ ಇರುವುದು ಕಾಣದ ಕೈಗಳ ಕೈವಾಡ ಇರುವುದು ಕಂಡು ಬರುತ್ತಿದೆ.

ಸದ್ಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಪ್ರವೀಣ ನಿಲಮಣ್ಣವರ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಅದೇ ಠಾಣೆಗೆ ಮೇಟಿ ಅವರಿಗೆ ವರ್ಗಾವಣೆ ಮಾಡಲಾಗಿದೆ.ಸುಮಾರು ದಿನಗಳ ಕಳೆದ್ರೂ ಸಹ ಅವರಿಗೆ ಚಾರ್ಜ್ ಕೊಟ್ಟಿಲ್ಲ, ಯಾಕೇ ಎಂಬ ಅನುಮಾನ ಮೂಡಿದೆ.

ಈ ಹಿಂದೆ ತುಮಕೂರು ಲೋಕಾಯುಕ್ತದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ಮೇಟಿ ಅವರಿಗೆ ತಮ್ಮ ತವರು ಜಿಲ್ಲೆಯಲ್ಲಿಯೇ ತಾರತಮ್ಯ ತೋರುತ್ತಿರುವುದು ಕಲಘಟಗಿ ಕ್ಷೇತ್ರದ ಜನತೆಯ ಆಕ್ರೋಶಕಕ್ಕೆ ಕಾರಣವಾಗಿದೆ.‌

ಇನ್ನೂ ಕ್ಷೇತ್ರದ ಜನತೆಯ ಮೇಲಿನ ಕೋಪಕ್ಕೊ ಗೊತ್ತಿಲ್ಲ ಆದರೆ ಇಂತಹ ಪ್ರಾಮಾಣಿಕ ಅಧಿಕಾರಿಗೆ ಮಾಡುತ್ತಿರುವ ಧೋರಣೆ ಸರಿಯಾದದ್ದು ಇಲ್ಲ. ಶೀಘ್ರವೇ ಶಿವರುದ್ರಪ್ಪ ಮೇಟಿ ಅವರಿಗೆ ಗೋಕುಲ ರಸ್ತೆ ಪೊಲೀಸ್ ಠಾಣೆ  ಕರ್ತವ್ಯಕ್ಕೆ ಅನುವು ಮಾಡಿಕೊಡಬೇಕಾಗಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.